ಕಾಸರಗೋಡು, ಡಿ.೭: ಮಂಗಳೂರು- ಕಾಸರಗೋಡು ನಡುವೆ ಖಾಸಗಿ ಬಸ್ ಓಡಾಟಕ್ಕೆ ಹೇರಿದ್ದ ನಿಷೇಧವನ್ನು ಪ್ರಶ್ನಿಸಿ ಖಾಸಗಿ ಬಸ್ ಮಾಲಕರು ಸುಪ್ರೀಂ ಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದು, ಈ ಅರ್ಜಿಯ ವಿಚಾರಣೆ ನಡೆದು ಹೊಸ ಆದೇಶ ಬರುವವರೆಗೆ ಖಾಸಗಿ ಬಸ್‌ಗಳ ಓಡಾಟಕ್ಕೆ ಅನುವು ಮಾಡಿಕೊಡಲಾಗಿದೆ. |
ಕಾಸರಗೋಡು-ಮಂಗಳೂರು ಮಾರ್ಗವಾಗಿ ಓಡಾಡುವ ಎರಡು ಖಾಸಗಿ ಬಸ್‌ಗಳ ಪರವಾನಿಗೆ ನಕರಿಸದಂತೆ ಸುಪ್ರೀಂ ಕೋರ್ಟ್ ನೀಡಿದ್ದ ತಡೆಯಾಜ್ಞೆಯ ಹಿನೆಲೆಯಲ್ಲಿ ಈ ಮಾರ್ಗವಾಗಿ ಓಡಾಡುವ ಎಲ್ಲ ಬಸ್‌ಗಳನ್ನು ನಿರ್ಬಂಧಿಸುವಂತೆ ಕೇರಳ ಸಾರಿಗೆ ಪ್ರಾಧಿಕಾರ ಸಾರಿಗೆ ಅಧಿಕಾರಿಗಳಿಗೆ ನೀಡಿದ್ದ ಮಾಹಿತಿಯಂತೆ ಖಾಸಗಿ ಬಸ್‌ಗಳ ಓಡಾಟ ನಿಷೇಧಿಸಿ ಆದೇಶ ಹೊರಡಿಸಲಾಗಿತ್ತು.
ಈ ಆದೇಶವನ್ನು ಪ್ರಶ್ನಿಸಿ ಖಾಸಗಿ ಬಸ್ ಮಾಲಕರು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ ದ್ದರು. ಈ ಅರ್ಜಿಯ ವಿಚಾರಣೆ ಜ.೪ರಂದು ನಡೆಯ ಲ್ಲಿದ್ದು, ಅಲ್ಲಿಯವರೆಗೆ ಖಾಸಗಿ ಬಸ್‌ಗಳ ತೊಡಕಾಗದು ಎಂದು ಖಾಸಗಿ ಬಸ್ ಮಾಲಕರು ತಿಳಿಸಿದ್ದಾರೆ.
ಕಾಸರಗೋಡು-ಮಂಗಳೂರು ಮಾರ್ಗವಾಗಿ ಓಡಾಡಲು ೭೦ ಖಾಸಗಿ ಬಸ್‌ಗಳಿಗೆ ಅನುಮತಿ ನೀಡಲಾಗಿತ್ತು. ಅವುಗಳಲ್ಲಿ ಅನೇಕ ಬಸ್‌ಗಳ ಪರವಾನಿಗೆ ನಕರಣಗೊಳ್ಳದಿರುವುದರಿಂದ ಈಗ ೩೮ ಬಸ್‌ಗಳು ಓಡಾಡುತ್ತಿವೆ. ಇವುಗಳಲ್ಲಿ ಬಹುತೇಕ ಬಸ್‌ಗಳು ೨೦೧೨ರ ವರೆಗೆ ಓಡಾಟದ ಪರವಾನಿಗೆ ಹೊಂದಿವೆ.
ಪರವಾನಿಗೆಯ ಅವಧಿ ಮುಗಿಯುವವರೆಗಾದರೂ ಓಡಾಟಕ್ಕೆ ಅನುವು ಮಾಡಿಕೊಡಿ ಎಂಬುದು ಖಾಸಗಿ ಬಸ್ ಮಾಲಕರ ಬೇಡಿಕೆಯಾಗಿದೆ.
೨೦೦೧೨ರ ವರೆಗೆ ಅನುಮತಿ ಇದೆ
ಉಭಯ ರಾಜ್ಯಗಲ್ಲಿ ಖಾಸಗಿ ಬಸ್‌ಗಳು ಓಡಾಡಬೇಕಾದರೆ ಸಾರಿಗೆ ಸಚಿವಾಲಯದ ಮಟ್ಟದಲ್ಲಿ ಒಪ್ಪಂದ ಮಾಡಿಕೊಳ್ಳಬೇಕಾದುದು ನಿಯಮ.
ಆದರೆ ಸಾರಿಗೆ ಆಯುಕ್ತರ ಮಟ್ಟದಲ್ಲಿ ಮಾಡಿ ಕೊಂಡ ಹೊಂದಾಣಿಕೆಯ ಒಪ್ಪಂದದಂತೆ ೧೯೬೪ರಲ್ಲಿ ನಾಲ್ಕು ಖಾಸಗಿ ಬಸ್‌ಗಳ ಓಡಾಟಕ್ಕೆ ಅನುಮತಿ ನೀಡಲಾಗಿತ್ತು. ಆದರೆ ಈಗ ೭೦ ಬಸ್‌ಗಳು ಪರವಾನಿಗೆ ಪಡೆದುಕೊಂಡಿವೆ.
ಈಗ ಕಾಸರಗೋಡು-ಮಂಗಳೂರು ರಾಷ್ಟ್ರೀಯ ಹೆದ್ದಾರಿ
ರಾಷ್ಟ್ರೀಕರಣಗೊಂಡಿರುವುದರಿಂದ ಖಾಸಗಿ ಬಸ್‌ಗಳಿಗೆ ಲಗಾಮು ಹಾಕಲು ಆರು ತಿಂಗಳ ಹಿಂದೆ ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು. ಆದರೆ ಖಾಸಗಿ ಬಸ್‌ಗಳು ೨೦೧೨ರವರೆಗೆ ಪರವಾನಿಗೆ ಪಡೆದಿರುವದು ಕಾನೂನಿನ ಹೋರಾಟಕ್ಕೆ ಅನುವು ಮಾಡಿಕೊಟ್ಟಿದೆ.
‘ನಮ್ಮದೇನೂ ಪಾತ್ರ ಇಲ್ಲ’
ರಾಜ್ಯ ಸಾರಿಗೆ ಪ್ರಾಧಿಕಾರ ನೀಡಿದ ಆದೇಶದಂತೆ ಖಾಸಗಿ ಬಸ್‌ಗಳ ಓಡಾಟ ಸ್ಥಗಿತಗೊಳಿಸಲು ನೋಟಿಸ್ ನೀಡಲಾಗಿದೆ. ಇದರಲ್ಲಿ ನಮ್ಮದೇನೂ ಪಾತ್ರ ಇಲ್ಲ. ಸುಪ್ರೀಂ ಕೋರ್ಟ್‌ನ ಆದೇಶವನ್ನು ಪರಿಗಣಿಸಿ ಈ ಪ್ರಕ್ರಿಯೆ ನಡೆದಿದೆ.
ಎಂಟು ದಿನಗಳಲ್ಲಿ ನ್ಯಾಯಾಲಯದ ಹೊಸ ಆದೇಶ ಬರಲಿದ್ದು ಅಲ್ಲಿಯ ವರೆಗೆ ಖಾಸಗಿ ಬಸ್ ಸಂಚಾರಕ್ಕೆ ನಿಷೇಧ ಹೇರುವುದು ಬೇಡ ಎಂದು ಸಾರಿಗೆ ಆಯುಕ್ತರು ಆದೇಶಿಸಿದ್ದಾರೆ ಎಂದು ಕಾಸರಗೋಡು ಸಾರಿಗೆ ಅಧಿಕಾರಿ ಪಿ.ಚಂದ್ರನ್ ನಾಯರ್ ತಿಳಿಸಿದ್ದಾರೆ.